ಬರವಣಿಗೆ

ಮುಗಿಲ ತುಂಬ ಮೋಢಗಳ ಮೆರವಣಿಗೆ,
ಎಸ್ಟು ಬರೆದರು ಮಗಿಯದು, ಪ್ರೀತಿಯ ಬರವಣಿಗೆ.
ಸುರಿಯುವ ಹನಿಗಳ ಚಟಪಟ ಸದ್ದಿಗೆ,
ಹೃದಯ, ಪಟಪಟ ಹಾರಿದೆ.
ಮೋಢ ಕವಿದ ವಾತವರಣ,
ತುಂತರು ಹನಿಗಳ ತುಂಟಾಟಕೆ ಮಾಡುವೆನಾ…..
ಪ್ರೀತಿಯ ಅನಾವರಣ.
ಒಪ್ಪುವಳಾ ಗೆಳತಿ ನನ್ ನನ್ನಾ,
ಈ ಮುಂಗಾರಿನ, ಮೊದಲ ಪ್ರೀತಿಯನ್ನಾ…….?
ಮುಗಿಲ ತುಂಬ ಮೋಢಗಳ ಮೆರವಣಿಗೆ,
ಎಸ್ಟು ಬರೆದರು ಮಗಿಯದು, ಪ್ರೀತಿಯ ಬರವಣಿಗೆ.
ಮೊದಲ ಮಳೆಹನಿಯಲಿ ಹುಡುಕುತಿರುವೆನಾ….
ನಿನ್ನ ಬಿಂಬ.
ಕಣ್ ತುಂಬವ ಕಂಬನಿಯಲಿ ನಿನ್ ನಿನ್ನದೆ ಬಿಂಬ.
ಒಂದೇ ಸಮನೆ ಸುರಿಯುವ ಈ ಮಳೆ ಹನಿಗೆ,
ಕೊಚ್ಚಿ ಹೋಗದಿರಲಿ, ನನ್ನ ಕನಸು.
ಕೈ ಮುಗಿದು ಬೇಡುವೆನು,
ದಯಮಾಡಿ, ಈ ಪ್ರೀತಿ ಉಳಿಸು.
ಈ ಪ್ರೀತಿ ಉಳಿಸು……
ಮುಗಿಲ ತುಂಬ ಮೋಢಗಳ ಮೆರವಣಿಗೆ,
ಎಸ್ಟು ಬರೆದರು ಮಗಿಯದು ಪ್ರೀತಿಯ ಈ ಬರವಣಿಗೆ

Advertisements
Published in: on ಏಪ್ರಿಲ್ 23, 2009 at 3:30p04  ನಿಮ್ಮ ಟಿಪ್ಪಣಿ ಬರೆಯಿರಿ  

ನೆನಪಿನ ಬುಟ್ಟಿಯಿಂದ….

 ಆಗಿನ್ನು ನಾ ಚಿಕ್ಕ ಹುಡುಗ, ನಾವಿದಿದ್ದು ಚಿಕ್ಕ ಹಳ್ಳಿಯಲ್ಲಿ, ವಾವ್  ಎಸ್ಟು ಚೆನ್ನಾಗಿತ್ತು ನಮ್ಮ ಹಳ್ಳಿ, ಮಳೆಗಾಲದಲ್ಲಂತೂ ಹಳ್ಳ, ಕೆರೆ  ಎಲ್ಲ ತುಂಬಿರುತಿದ್ದವು, ಆ ಕೆಸರಲ್ಲಿ ಬರಿಗಾಲಲಿ ನೆಡೆಯೊದು ಎಸ್ಟು ಮಜ ಇರುತಿತ್ತು, ಶಾಲೆಯಲ್ಲಿ ಆಡುತಿದ್ದ ಆಟಗಳು, ಮತ್ತೆ ಆ ದಿನಗಳು ಬದುಕಲ್ಲಿ ಎಂದು ಬರೊದಿಲ್ಲ, ನಾ ಆಗೆಲ್ಲಾ ಶಾಲೆಗೆ ಒಂಬತ್ತು ಗಂಟೆಗೆ ಹೋಗಿಬಿಟ್ಟಿರುತಿದ್ದೆ, ಒಂದರಿಂದ ಏಳನೆ ತರಗತಿಯವರೆಗೆ ನಾನೆ ಲೀಡರ್, ನಾ ಸ್ವಲ್ಪ ಸಿನ್ಸಸಿಯರ್ ಜಾಸ್ತಿ, ಯಾರು ಗಲಾಟೆ ಮಾಡಿದರು, ಹೆಡ್ ಮಾಸ್ಟರ್ ಹತ್ತಿರ ಎಳಕೊಂಡು ಹೋಗುತ್ತಾ ಇದ್ದೆ, ನನ್ನ ಫ಼್ರೆಂಡ್ಸಗಳನ್ನು ಸಹ, ನಾ ಏಳನೆ ತರಗತಿಯಲ್ಲಿದ್ದಾಗ ನಾವು ಕಬಡ್ಡಿ ಜಾಸ್ತಿ ಆಡುತಿದ್ದಿವಿ, ಒಂದು ದಿನ ಹುಡುಗಿಯರು ನಮ್ಮ ಜೊತೆ ಕಬಡ್ಡಿ ಆಡಲು ಬಂದರು, ನನಗಿನ್ನು ನೆನಪಿದೆ, ನಾವು ಆ ದಿನ ಕಬಡ್ಡಿಯಲ್ಲಿ ಸೋತೆವು ಕಾರಣ…! ನನ್ನ ನೆನಪಿನ ಬುಟ್ಟಿಯಲ್ಲಿ ಈ ತರದ ಉದಾ: ತುಂಬ ಇವೆ, ಆದರೆ ಕೆಲವನ್ನು ಮಾತ್ರ ಹೇಳುತ್ತೆನೆ, ನಮ್ಮ ಮನೆಯಲ್ಲಿ ಆಟ ಆಡೊದಿಕ್ಕೆ ಬಿಡುತಿರಲಿಲ್ಲ, ಯಾವಗಲು ಓದು ಓದು ಅಂತ ತಾತ ತಲೆ ತಿನ್ನುತ್ತಿದ್ದರು, ಆಗೆಲ್ಲಾ ನಾ ಎಂದು ಇಸ್ಟ ಪಟ್ಟು ಓದಿದವನಲ್ಲಾ, ಬಲವಂತಕ್ಕೆ ಬುಕ್ಸ ಹಿಡಿದು ಕೊತಿರುತ್ತಿದ್ದೆ, ಆದರೆ ತುಂಬ ಸಲ ಏನಾದರು ಸುಳ್ಳು ಹೇಳಿ ಆಟ ಆಡೋದಿಕ್ಕೆ ಹೋಗಿರುತ್ತ ಇದೆ, ಆಗ ತಾತ ಊರೇ ಕಿರುಚಿಹೋಗುವ ರೀತಿ ಕೊಗುತಾ ಇದ್ದರು, ಅವರನ್ನು ಕೊಗಿಸೊದರಲ್ಲಿ ನನಗೆ ಮಜ ಇರುತಿತ್ತು.ನಮ್ಮ ಊರಲ್ಲಿ ಪ್ರತಿ ವರುಷವು ಜಾತ್ರೆ ನೆಡೆಯುತ್ತೆ, ಜಾತ್ರೆಗೆ ದೇವರನ್ನು ಪಕ್ಕದ ಊರಿಂದ ಕರೆತರುತ್ತಿದ್ದರು, ತಮಟೆ ಸದ್ದಿನ ಜೊತೆ ಊರಿನ ಹುಡುಗರೆಲ್ಲಾ ಹೋಗುತ್ತಾಯಿದ್ದರು, ದೇವರನ್ನು ಕರೆತರಲು, ನನಗು ಹೋಗುವ ಆಸೆ ಆದರೆ ಮನೆಯಲ್ಲಿ ಬಿಡುತಿರಲಿಲ್ಲ, ನಾ ಹತ್ತನೆ ತರಗತಿ ಓದುತ್ತ ಇದ್ದೆ, ಆ ವರಷ ಮಾತ್ರ ಆ ಅದೃಸ್ಟ ನನ್ನನ್ನೆ ಹುಡುಕಿಕೊಂಡು ಬಂದಿತ್ತು, ಅದು ಎನು ಅಂದರೆ ದೇವರನ್ನು ಕರೆತರಲು ಆರತಿಯನ್ನು ತಗೊಂಡಗಬೇಕು, ಆ ವರುಷ ಅರತಿ ಹೊರುವ ಸರದಿ ನನ್ನಾದಗಿತ್ತು, ನನಗೆ ಅರತಿ ಹೊರಲು ಒಂಥರ ಖುಷಿ, ಒಂಥರ ಮುಜುಗರ, ಜನರೆಲ್ಲಾ ದೇವರ ಜೊತೆ ನನಗು ಕೈಮುಗಿತ್ತಿದ್ದರು, ಮತ್ತು ದೇವರು ಎಲ್ಲೆ ಹೋಗಲಿ ಆರತಿ ಹೊತ್ತು ನಾ ಮಂದೆ ನಡೆಯಬೇಕಿತ್ತು, ಜಾತ್ರೆಯ ಕೊನಯದಿನ ತುಂಬ ಚೆನ್ನಾಗಿರುತ್ತೆ, ಆ ದಿನ ರಾತ್ರಿ ದೇವರನ್ನು ಹೊತ್ತು ಜನಗಳು ಕುಣಿಯುತ್ತಾರೆ, ಮುಂಚೆಯಲ್ಲಾ ನನಗೆ ಅದನ್ನು ನೋಡಲು ತುಂಬ ಭಯವಾಗುತ್ತಿತ್ತು, ಆದರೆ ಆರತಿ ಹೊತ್ತಿದ್ದರಿಂದ ದೇವರ ಪಕ್ಕದ್ದಲ್ಲೆ ಇರಬೇಕಿತ್ತು, ಪ್ರತಿ ವರುಷವು ದೇವರು ಕೆಲವರ ಮೈ ಮೇಲೆ ಬರುತ್ತಿತ್ತು (ಅವರೆ ದೇವರ ಮೈ ಮೇಲೆ ಹೋಗುತ್ತಿದ್ದರೊ, ನನಗೆ ಗೊತಿಲ್ಲ) ನಮ್ಮ ಆಣ್ನ ಒಬ್ಬ ಇದ್ದಾ(ಸ್ವಂತ ಅಣ್ಣ ಅಲ್ಲ) ಅವನು ದೇವರನ್ನು ಹೊತ್ತಿ ಕೊಂಡು ಕುಣಿಯುತಿದ್ದಾ, ಆ ದಿನ ದೇವರು ಅವನ ಮೈ ಮೇಲೆ ಬಂತು…..! ಮತ್ತು ಆತ ಹೇಳಿದ ಆರತಿಯನ್ನು ನಮ್ಮ ಮನೆಯವರೆ(ತಮ್ಮ) ಹೊರ ಬೇಕು ಅಂತ…. ಅಲ್ಲಿಗೆ ನಾನು ಆರತಿ ಹೊರುವ ಸರದಿ ಮುಗಿಯಿತು, ಮತ್ತು ಆ ವರುಷವೆ ನಾವು ಸಿಟಿಗೆ ಬಂದೆವು(ನನ್ನನ್ನು ಕಾಲೇಜಿಗೆ ಸೇರಿಸಲು). ಅಲ್ಲಿಗೆ ನನ್ನ ಬದುಕಿನ ಹ್ಯಾಪಿಯಾದ ಕ್ಷಣಗಳು ಕೊನೆಗೊಂಡವು, ನನಗೆ ಇಂಗ್ಲಿಷ ಅಂದರೆ ಸ್ವಲ್ಪವು ಇಸ್ಟವಿಲ್ಲಾ, ನಮ್ಮ ಅಪ್ಪಾ ನಾ ಹತ್ತನೆ ತರಗತಿಯಲ್ಲಿದ್ದಾಗ do u know physics ಅಂದರೆ ಏನು ಅಂತ ಕೇಳಿದ್ದರು, ನನಗೆ ನಿಜವಾಗಿಯು ಅದರ ಅರ್ಥ ಆಗ ಗೊತ್ತಿರಲಿಲ್ಲ, ಅದರೆ ಯಾರು ಸಹ ನನ್ನನ್ನು ನಿನಗೆ ಯಾವುದು ಇಸ್ಟ ಅಂತ ಕೇಳಲಿಲ್ಲಾ ನನ್ನನ್ನು ನೇರವಾಗಿ ಸೈನ್ಸಗೆ ಸೇರಿಸಿದರು, ನಾನು ಹೇಗೊ ಓದಿದೆ, ಮತ್ತು ನಾ ಹಳ್ಳಿಬಿಟ್ಟು ಇಲ್ಲಿಗೆ ಆರು ವರುಷ, ಮತ್ತೆ ಎಂದು ಅಲ್ಲಿಗೆ ಹೋಗಲಾಗಲಿಲ್ಲಾ….. ಈ ಸಿಟಿ ನನ್ನ ಬದುಕನ್ನು ಹಾಳು ಮಾಡಿದೆಯೊ ಇಲ್ಲವೊ ಗೊತಿಲ್ಲಾ, ಆದರೆ ನಾ ಹಳ್ಳಿಯಲ್ಲಿ ತುಂಬ ತುಂಬ ಹ್ಯಾಪಿಯಾಗಿದ್ದೆ ಅಂತ ಮಾತ್ರ ಹೇಳಬಲ್ಲೆ……                     

 

Published in: on ಏಪ್ರಿಲ್ 6, 2009 at 3:30p04  ನಿಮ್ಮ ಟಿಪ್ಪಣಿ ಬರೆಯಿರಿ  

ಎನು ಹೇಳಲಿ ನೀನೆ ಹೇಳು….?

ಈಗೀಗ ನೀನು ನನ್ನದೆಯಲಿ ಚಲಿಸುತಿರುವ ಹಾಗೆ,

ಎನೋ ಪುಳಕವು, ಹೊಸ ಹರುಷವು,

ನಿನ್ನ ನೋಡುತ ನಿಂತು ನಾನು,

ನನ್ನೆ ನಾ ಮರೆತಿರುವೆ,   

ಎನು ಹೇಳಲಿ ನೀನೆ ಹೇಳು,

ಒಮ್ಮೆಯಾದರು ನನ್ನ ಕೇಳು,

ನಿನ್ನೆ ಪ್ರೀತಿ ಮಾಡುವೆ ನಾನು,

ಪ್ರತಿ ಜನುಮ ಜನುಮದಲ್ಲೂ…..

ಚಂದಿರನ ಮೊಗದಲಿ ನಿನ್ನ ಮೊಗವ ಬಿಡಿಸಿ,

ಮುಗಿಲ ಮೌನದಲಿ ಚಿತ್ತಾರ ಮೊಡಿಸಿ,

ಕದ್ದೊಯ್ಯಬೇಕು ನಿನ್ನ ನಗುವನು,

ನಾಚಿ ನೀರಾಗುವ ಅ ಪರಿಯನು,

ಎನು ಹೇಳಲಿ ನೀನೆ ಹೇಳು,

ಒಂದು ಕ್ಷಣ ನೀ ಕಾಣದಾದರು,

ಒಂದೇ ಸಮನೆ ಕೊಗುವ ಹೃದಯವ ಕೇಳು,

ನಿನ್ನೆ ಪ್ರೀತಿ ಮಾಡುವೆ ನಾನು

ಪ್ರತಿ ಜನುಮ ಜನುಮದಲ್ಲೂ…….

 

Published in: on ಏಪ್ರಿಲ್ 1, 2009 at 3:30p04  Comments (2)  

ಮಧುರ ನೆನಪಿಗೆ

ಮಧುರ ನೆನಪಿಗೆ ನೀನೆ ಬರೆದ ಸಂಭಾಷಣೆ,
ಮತ್ತೆ ಯಾಕೆ ಈ ರೀತಿಯ ವಿಶ್ಲೆಷಣೆ,
ನಿನ್ನ ಬದುಕಿನಲಿ ಬರಿ ದಾರಿ ಹೋಕ ನಾನು,
ಒಮ್ಮೆ ನಿನ್ನ ನೋಡಿ ಹಾಗೆ ಹಿಂತಿರುಗುವೆ,
ಮನದ ಜೋಪಡಿ ಮುರಿದು ಹೋಗಿದೆ,
ಇನ್ಯಾರನು ಹುಡುಕಿತರಲಿ ನಾನು,
ಕೇಳುವೆಯ ಒಮ್ಮೆ ಮನದ ಅಳಲನು, 
ಪ್ರತಿ ಪುಟಗಳು ಹರಿದು ಹೋದವು
ಇನ್ನೂ ತೆರೆಯದಲೆ,
ಮುಗಿಲ ಮೋಡಗಳು ಕರಗಿ ಹೋದವು
ಇನ್ನೂ ಹನಿಗಳ ಸುರಿಸದಲೆ,
ಇನ್ಯಾರ ಕನಸಲಿ ನಾ ನಿನ್ನ ಹುಡಕಲಿ….

Published in: on ಮಾರ್ಚ್ 30, 2009 at 3:30p03  ನಿಮ್ಮ ಟಿಪ್ಪಣಿ ಬರೆಯಿರಿ  

ಇಂತಿ ನಿಮ್ಮ ನೆನಪಿನ

ಕ್ವಿಂವ್ ಕ್ವೀವ್ …. ಆಗೆಲ್ಲಾ ನಾ ಎಸ್ಟು ಚೆನ್ನಾಗಿ ಕೊಗುತಾಯಿದ್ದೆ, ಎಸ್ಟು ಬಿಂದಾಸಗಿತ್ತು ಬದುಕು, ಶಾಲೆಯಲ್ಲಿ ಮತ್ತು ಮನೆಗಳ ಹೆಂಚಿನ ಸಂದಿಯಲೆಲ್ಲಾ ನಾ ಗೂಡು ಕಟ್ಟುತಾಯಿದ್ದೆ, ಅಂತು ನಮ್ಮದು ಒಂದು ಹ್ಯಾಪಿ ಪ್ಯಾಮಿಲಿಯಾಗಿತ್ತು, ನಾ ಒಂದು ವಿಷಯ ಹೇಳಲೆ ಬೇಕು, ನೆನಸಿಕೊಂಡರೆ ಈಗಲು ನಗು ಬರುತೆ, ನನಗೆ ಇಬ್ಬರು ಮಕ್ಕಳು,  ಅಶು ಮತ್ತು ಚಿಂಟು, ಪ್ಯಾಮಿಲಿ ಪ್ಲಾನಿಂಗ್ ಯೋಜನೆರಿ ಅದಕ್ಕೆ ಇಬ್ಬರು, ನಮ್ಮ ಚಿಂಟು ಬಾಳ ತುಂಟ, ನಮ್ಮ ಗೊಡು ಇದ್ದಿದ್ದು ಸರ್ಕಾರಿ ಸ್ಕೊಲಲ್ಲಿ, ಚಿಂಟು ಮಕ್ಕಳ ತಲೆ ಮೇಲೆ ಕಸರೆ ಮಾಡಿಬಿಡುತಿದ್ದ, ನಾ ಎಸ್ಟು ಹೇಳಿದರು ಕೇಳುತಿರಲಿಲ್ಲ, ಮತೆ ನಮ್ಮ ಅಶುಗೆ ಹೇಮಂತನನ್ನು ಕಂಡರೆ ತುಂಬ ಇಸ್ಟ, ಆಗಿನ್ನು ಅವನು ಎಂಟನೆ  ತರಗತಿಯಲ್ಲಿ ಒದುತಾಯಿದ್ದ, ಸೊ ನಾವು ಅ ಎಂಟನೆ ತರಗತಿ ರೊಮಲ್ಲೆ ಗೊಡು ಕಟ್ಟಿದ್ದೆವು, ಅವನು ಒಂಬತ್ತನೆ ತರಗತಿಗೆ ಹೋದಾಗ ನಮ್ಮ ಅಶು ಹಟ ಹಿಡಿದು ಗೊಡನ್ನು ಆ ರೊಮಿಗೆ ಬದಲಾಯಿಸಿದಳು, ನನಗಂತು ಗೊಡು ಬದಲಾಯಿಸೋದು ಅಂದರೆ ತಲೆ ನೋವಿನ ವಿಷಯ, ಅದರೆ ನಾ ಅಶುನ ತುಂಬ ಪ್ರೀತಿಸುತೆನೆ, ಸೊ ಅವಳಿಗಾಗಿ ಗೊಡನ್ನು ಬದಲಾಯಿಸುವದು ಅನಿರ್ವಾಯವಾಗಿತ್ತು, ಹೇಮಂತ್ ಆ ಊರಿನ ಸ್ರೀಮಂತರ ಮಗ, ಅವನು ಪ್ರತಿ ದಿನ ಆಶುಗೆ  ತಿಂಡಿಯನ್ನು ಕೊಟ್ಟೆ ತಿನ್ನುತಾಯಿದಿದ್ದು, ಅವನು ಸ್ಕೂಲ್ ಗೆ ಬರಲಿಲ್ಲ ಅಂದರು ಅಶುಗೆ ತಿಂಡಿ ಕೊಡಲು ಮರೆಯದೆ ಬರುತಾಯಿದ್ದ, ಅವಳು ಸಹ ಅವನಿಗಾಗಿ ಪ್ರತಿ ದಿನ ಕಾಯುತ ಕೊರುತಿದ್ದಳು, ಅವನು ಬರಲಿಲ್ಲಾ ಅಂದರೆ ಅವತ್ತು ಅವಳು ಎನು ಮಾಡಿದರು ಊಟ ಮಾಡುತಿರಲಿಲ್ಲ, ಹೀಗೆ ಬದುಕು ಹ್ಯಾಪಿಯಾಗಿ ಸಾಗುತಯಿತ್ತು, ಹೇಮಂತ್ ಕಾಲೇಜ್ ಸೇರಿದ, ನಮ್ಮ ಗೊಡು ಹಾಗೆ ನಾವು ಸಹ ಕಾಲೇಜ್ ಸೇರಿದೆವು, ಅದೊಂದು ದುರಂತ ಕಥೆ….! ಆ ಪುಟ್ಟ ಹೃದಯ ಕನಸುಗಳಿಗೆ ಬಲಿಯಾದ ದುರಂತ ಕಥೆ, ಕಾಲೇಜ್ ಸೇರಿದ ಕೆಲವೆ ದಿನಗಳಲ್ಲಿ ನಮ್ಮ ಅಶು…. ನನ್ನ ಪ್ರೀತಿಯ ಅಶು ನಮ್ಮಿಂದ ದೊರಾದಳು, ಆ ದಿನ ಎನಾಯಿತು ಅಂದರೆ ಇದ್ದಕಿದ್ದಂತೆ ಕ್ವಿಂವ್ ಕ್ವೀವ್ ….ಅನ್ನುವ ದನಿ ಕೇಳಿಸಿತು, ನನಗಂತು ನಂಬಲು ಅಗಲೆ ಇಲ್ಲ, ಅಶು ಹೇಳಿದಳು ಅದು ಮೊಬ್ಯಲ್ ಅಂತೆ ಹೇಗೆ ಬೇಕಾದರು ಮಾತಡುತ್ತಂತೆ, ಅದನ್ನು ಹೇಮಂತ್ ಹೊಸದಾಗಿ ಕೊಂಡುಕೊಂಡ್ಡಿದ್ದ, ಅಶು ನನಗು ಒಂದು ಮೊಬ್ಯಲು ಬೇಕು ಅಂತ ಹಟ ಹಿಡಿದಳು, ನನ್ನ ದುರಾದೃಸ್ಟ ನನ್ನಿಂದ ಅದು ಸಾಧ್ಯವಾಗಲಿಲ್ಲ ಮತ್ತು ಅಶು ಮನೆ ಬಿಟ್ಟು ಹೊರಟು ಹೋದಳು, ಆ ದಿನದಿಂದ ನಾ ಗೊಡು ಬಿಟ್ಟು ಹೊರಬರುವದನ್ನು ನಿಲ್ಲಿಸಿ ಬಿಟ್ಟೆ, ಚಿಂಟು ಹೇಳಿದ ಅಶು ಈಗ ಹೇಮಂತ್ ಮನೆಯಲ್ಲೆ ಗೊಡು ಕಟ್ಟಿದ್ದಾಳಂತೆ ಮತ್ತು ಇನ್ನು ಕೆಲವೆ ದಿನಗಳಲ್ಲಿ ತಾಯಿಯಾಗುತಿದ್ದಾಳಂತೆ, ನಾ ಕಣ್ ಮುಚ್ಚಿ ಅಳುತ ಇದ್ದೆ, ನನಗೆ ಅಶುನ ನೋಡ ಬೇಕು ಅನಿಸುತೆ ಅದರೆ ನಾ …., ಸಾವಿನ ದಿನಗಳನ್ನು ಎಣಿಸುತ್ತಾಯಿದ್ದೆನೆ ಮತ್ತು ಸಾವಿಗಾಗಿ ಕಾಯುತಿದ್ದೆನೆ, ಆ ದಿನ ಇನ್ನು ನೆನಪಿದೆ ಅದು ನನ್ನ ಬದುಕಿನ ಕೊನೆಯ ದಿನ….! ಅವತ್ತು ಆಶು ಹುಟ್ಟಿದ ದಿನ, ಕಾಲೇಜಲ್ಲಿ ಮೇಸ್ಟ್ರು ಪಾಟ ಮಾಡುತಿದ್ದರು, ಅದೆ ಮೊಬ್ಯಲ್ ಬಗ್ಗೆ ನನ್ನ ಕಿವಿ ಚುರುಕಾಯಿತು, “ಮೊಬ್ಯಲಿಂದ ಬರುವ ಕಿರಣಗಳಿಂದ ಹೃದಯಕ್ಕೆ ತೊಂದರೆಯಗುತ್ತೆ ಮತ್ತು ಇ ಕಿರಣಗಳು ಪ್ರಾಣಕ್ಕೆ ಅಪಾಯವನ್ನು ತರುತ್ತವೆ” ನನಗೆ ಅಸ್ಟೆ ಕೇಳಿಸಿದ್ದು ನನ್ನ ಹೃದಯ ಒಂದುಕ್ಷಣ ನಿಂತಿ ಹೋಗಿತ್ತು, ಅದನ್ನು ಉಹಿಸಿಕೊಂಡರು ಭಯವಗುತ್ತೆ ಅಶು……… ನಾ ಅಶುನ ಕೊಗುತ್ತಾ ಹೇಮಂತ್ ಮನೆ ಕಡೆ ಹೊರಟೆ, ಅದರೆ ಅದು ತುಂಬ, ತುಂಬ ಲೇಟ್ ಅಗಿತ್ತು. ಮತ್ತು ಅಶು ಸತ್ತು ಹೋಗಿದ್ದಳು. ನಾ ಅಲ್ಲಿ ಹೋದಾಗ ಹೇಮಂತ್ ಅಶುನ ಮನೆಯಿಂದ ಹೊರಗೆ ಎಸೆಯುತಿದ್ದ, ನಾ ಅಶುನ ಮರಿಗಳಿಗಾಗಿ ಗೊಡಿನ ಹತ್ತಿರ ಹೊದೆ, ಓ ಗಾಡ್ ದಯವಿಟ್ಟು ನನ್ನನ್ನು ಕೊಂದು ಬಿಡು, ಅಶು ಸತ್ತು ಅಗಲೇ ತುಂಬ ದಿನ ಅಗಿತ್ತು ಅನಿಸುತೆ, ಅಲ್ಲಿದ್ದ ಎರಡು ಮರಿಗಳು ಹಸಿವೆಯಿಂದ ಸಾಯುತ್ತಿದ್ದವು ಮತ್ತು ನನ್ನನ್ನು ನೋಡಿ ಊಟಕ್ಕಾಗಿ ಬಾಯಿತೆರೆಯುತ್ತಿದ್ದವು ಅವುಗಳಿಗೆ ಕೊಗಲು ಸಹ ಶಕ್ತಿ ಇರಲಿಲ್ಲ,  ಓ ಗಾಡ್ ದಯವಿಟ್ಟು ನನ್ನನ್ನು ಕ್ಷಮಿಸಿ ಬಿಡು….! ನಾ ಆಗಲೇ ಸತ್ತು ಕೆಳಕ್ಕೆ ಬಿದ್ದೆ, ಹೇಮಂತ್ ನನ್ನನ್ನು ಸಹ ತಂದು ಹೊರಗೆಸೆದ, ಅದರೆ ಆ ಮೊಬ್ಯಲ್ ಮಾತ್ರ ತನ್ನ ಪಾಡಿಗೆ ತಾನು ಕ್ವಿಂವ್ ಕ್ವೀವ್ …. ಅಂತ ಕೊಗುತಿತ್ತು.      

                                                                          – ಇಂತಿ ನಿಮ್ಮ ನೆನಪಿನ

                                                                                 ಗುಬ್ಬಿ(ಗುಬ್ಬಚ್ಚಿ)

Published in: on ಮಾರ್ಚ್ 29, 2009 at 3:30p03  ನಿಮ್ಮ ಟಿಪ್ಪಣಿ ಬರೆಯಿರಿ  

ಪ್ರೀತಿಯ ಪ್ರತಿ ಬಿಂಬ, ಹೃದಯದ ತುಂಬ ತುಂಬ….

ಅದೇ….! ದೊಡ್ದ ದೊಡ್ದ ಬೊಟ್ ಬಂದು ನಿಲ್ಲುತವಲ್ಲಾ, ಹಸಿ ಹಸಿ ಮರಳು, ಎಲ್ಲಿ ನೋಡಿದರು ನೀರೆ ನೀರು, ಅ ಸಂಜೆ ನಾ ಅಲ್ಲಿ ಹೋಗಿದ್ದೆ, ನನಗನಿಸುತೆ ಅ ದಿನ ನನ್ನ ಬದುಕಿನಲಿ ಬರದೆ ಇದ್ದಿದ್ದರೆ ಚೆನ್ನಾಗಿರುತಿತ್ತು ಅಂತ….ನಾ ಅಲ್ಲಿ  ಹೋದಾಗ ಅಗಲೇ ಅ ಸೂರ್ಯ ಬಾನಂಗಳಕ್ಕೆ ಬಾಯ್ ಬಾಯ್ ಹೇಳಿ ಹೊರಟು ಹೋಗುತ ಇದ್ದ. ಹಾಗೆ ಅತ ನನ್ನ ಬದುಕಿನಿಂದಲು ಹೊರಟು ಹೋಗುತನೆ ಅನ್ನುವ ಅರಿವು ನನಗಿರಲಿಲ್ಲ…. ನಾ ನನ್ನ ಕನಿಸಿನ ಲೋಕದಲ್ಲಿ ತೇಲುತ ಇದ್ದೆ…. ಅ ನೀರಿನ ಅಲೆಗಳು ಬಂದು ದಡಕ್ಕೆ ಅಪ್ಪಳಿಸುತವಲ್ಲ ಅಗ ಕೆಲವೊಂದು ಹನಿಗಳು ಬಂದು ನನ್ನ ತುಟಿಗೆ ಮುತ್ತಿಟ್ಟು ಹಾಗೆ ಮಾಯವಾಗುತಿದ್ದವು. ನನಗನಿಸುತೆ ಅ ಹನಿಗಳ ಜೊತೆ ನಾನು ಸಹ ಮಾಯವಾಗಿಬಿಟ್ಟೆದೆ ಅಂತ, ಅಲ್ಲಿ ಮರಳಿರುತಲ್ಲಾ ಒಂದು ಪಾಪು ಕಾಲನ್ನು  ಮರಳಲಿಟ್ಟು ಗೊಡು ಕಟ್ಟುತಾಇತ್ತು, ನನಗು ಹಾಗೆ ಮಡಬೇಕು ಅಂತ ಅಸೆ ಅಯಿತು, ನಿಮಗೆ ಗೊತ್ತ ಅದು ಎಸ್ಟು ಹಸಿ ಹಸಿ ಮರಳು ಅಂತ….ಅಂತು ಗೊಡು ರೆಡಿ ಅಯಿತು, ಅಗಲೇ ಅ ಅಲೋಚನೆ ಬಂದಿದ್ದು, ಅದೇ ಅ ಗೊಡಲ್ಲಿ ನಾನು ಅವಳ ಜೊತೆ……ನಾ ಹೇಳಲಪ್ಪ, ಹಾಗೆ ಕಣ್ಣ್ ಮುಚ್ಚಿ ಪಕ್ಕದಲ್ಲೆ ಮಲಗಿದೆ, ಒಂದೆರಡು ನಿಮಿಷ ಅಗಿತ್ತು ಅನಿಸುತೆ, ನನ್ನ ತುಟಿ ಇದ್ದಕ್ಕಿದ್ದ ಹಾಗೆ ತಣ್ಣಗಾಯಿತು, ನನಗಿನ್ನು ನೆನಪಿದೆ….ನಿಮಗೆ ಗೊತ್ತ, ಬುವಿಗೆ ಬರುವ ಮೊದಲನೆ ಮಳೆ ಹನಿ ನನ್ನ ತುಟಿಯನ್ನು ಚುಂಬಿಸಿತ್ತು……..! ನನಗೆ ಅದು ಸಾಕು ಅನಿಸಲಿಲ್ಲ ಮಳೆ ಹನಿ ನನ್ನನ್ನು ಪೂರ್ತಿ ತೊಯಿಸಬೇಕು ಅನಿಸಿತು, ಅದಕ್ಕೆ ಅಲ್ಲೆ ಮಲಗಿ ಬಿಟ್ಟೆ, ಅದರೆ, ನಾ ಆಗ ನಿಜವಾಗಿಯು ಮರೆತಿದ್ದೆ, ಅ ಮಳೆ ಹನಿಗಳು ನನ್ನ ಗೊಡನ್ನು ಕೊಚ್ಚಿ ಕೊಂಡು ಹೋಗುತವೆ ಅನ್ನೊದನ್ನು, ಹಾಗೆ ನನ್ನ ಕನಸುಗಳನ್ನು ಸಹ…………. ಮಳೆ ಸ್ವಲ್ಪ ಜೋರಯಿತು, ಅ ಪಾಪುನ ಅವರಮ್ಮ ಬಂದು ಕರೆದು ಕೊಂಡು ಹೋದರು ಅನಿಸುತೆ, ಪಾಪು ಅಲ್ಲಿರಲಿಲ್ಲ, ಮಳೆ ಸ್ವಲ್ಪ ಜೋರಾಯಿತು, ಅಲೆಗಳು ಜೋರಾಗಿ ಬಂದು ದಡಕ್ಕೆ ಅಪ್ಪಳಿಸುತಾ ಇದ್ದವು, ಆ ಅಲೆಗಳ ಜೊತೆ ನಗುವಿನ ಅಲೆ ಅಲೆ….  ನಾ ತುಂಬ ಟ್ರ್ಯ್ ಮಾಡಿದೆ ಆ ದನಿಯನ್ನು ಗುರುತಿಸಲು ಯಾಕೆ ಅಂದರೆ ನಾ ನಗುವನ್ನು ತುಂಬ, ತುಂಬ ಸರಿ ಕೇಳಿದ್ದೆನೆ , ಅದರೆ ಆ ದಿನ ನಾ ಸೋತು ಹೋದೆ…. ಆ ದನಿಯನ್ನು ಗುರುತಿಸಲಾಗಲಿಲ್ಲ,  ನನಗೆ ತಿಳಿದಿರಲಿಲ್ಲ, ಆಗ ನಾ ಕಣ್ಣ್ ಬಿಟ್ಟಿದ್ದರೆ ಬಹುಷಃ ಸತ್ತೆ ಹೋಗುತ ಇದ್ದೆನೆನೊ, ಬದುಕಿಬಿಟ್ಟೆ….! ಅಸ್ಟರಲ್ಲಿ ಮಳೆ ಜೋರಾಯಿತು, ನಾ ಪೂರ್ತಿ ನೆನೆದು ಬಿಟ್ಟಿದ್ದೆ, ಆಗ ಆತ ಹೇಳಿದ್ದು ಕೇಳಿಸಿತು “ಯಾರೋ ಹುಚ್ಚ ಇರಬೇಕು, ಅದಕ್ಕೆ ಹೀಗೆ ಮಲಗಿದ್ದಾನೆ “, ನನಗೆ ನಗು ಬಂತು, ತುಂಬ ಜೋರಾಗಿ ನಕ್ಕು ಬಿಟ್ಟೆ, ಎನು….? ನಾ ಹುಚ್ಚನ, ಯಾಕೊ ಈಗೀಗ ಹಾಗೆ ಅನಿಸುತ ಇದೆ, ಅದು ನನ್ನ ಬದುಕಿನ ಕೊನೆಯ ನಗು….! ನಾ ಜೋರಾಗಿ ನಕ್ಕಿದ್ದು ನೋಡಿ, ಅವರಿಬ್ಬರು ಎದರಿಬಿಟ್ಟರು ಅನಿಸುತೆ, ಅದಕ್ಕೆ ಓಡಿ ಹೋಗಿ ಬಿಟ್ಟುರು, ನಾ ಇನ್ನು ಕಣ್ ಬಿಟ್ಟಿರಲಿಲ್ಲ, ನನಗೆ ಕಣ್ ಬಿಡುವದಕ್ಕೆ ಮನಸ್ಸಾಗಲಿಲ್ಲ, ಇನ್ನು, ಇನ್ನು ನೆನೆಯ ಬೇಕು ಅನಿಸುತ ಇತ್ತು, ಅದರೆ ಆ ನಗುವಿನ ಅಲೆಗಳು ಮತ್ತೆ ಮತ್ತೆ ನನ್ನ ಹೃದಯಕ್ಕೆ ಬಂದು ಅಪ್ಪಳಿಸುತಾ ಇದ್ದವು, ಅವಳು ನನ್ನನ್ನೆ ನೋಡಿ ನಗುತಿದ್ದಾಳೆನೊ ಅನಿಸಿತು, ಇದ್ದಕಿದ್ದಂತೆ ಮರಳು ಗೊಡು ನೆನಪಾಯಿತು, ತಕ್ಷಣ ಎದ್ದು ಬಿಟ್ಟೆ, ನನಗಿನ್ನೂ ನೆನಪಿದೆ….. ಆ ಹೆಜ್ಜೆ ಗುರುತುಗಳು, ಅದು ಅದು….! ಅವಳ ಹೆಜ್ಜೆಗುರುತುಗಳೆ, ಅದು ನನ್ನ ಮರಳ ಗೊಡಿನ ಮೇಲೆ, ನನ್ನಾ ಕನಸುಗಳೆಲ್ಲಾ ಚೊರು ಚೊರಾಗಿದ್ದವು, ಆ ಮರಳಿನ ಕಣಗಳು ನನ್ನನ್ನು ನೋಡಿ ನಗುತ ಇದ್ದವು ಅನಿಸುತೆ, ನಾ ಆ ಮರಳಿನ ಕಣಗಳಿಗೆ ಮುತ್ತಿಡುತಾಇದ್ದೆ, ಆ ನೋವಿನಲ್ಲು ನನಗೆ ಗೊತ್ತಾಗಿದ್ದು ಅಂದರೆ, ಇನ್ನು ನನ್ನ ಬದುಕಿನಲಿ ಉಳಿಯುವುದು ಬರಿ ನೆನಪು ಮತ್ತು ಹಸಿ ಹಸಿ ಮರಳು ಅಂತ, ನಾ ಅ ಮರಳನೆಲ್ಲಾ ಎತ್ತಿ ಜೋಬಲ್ಲಿ ಹಾಕೊಂಡೆ, ಆ ನಗು ಮಾತ್ರ ಇನ್ನು ನಿಂತಿರಲಿಲ್ಲಾ, ನನಗೆ ಮಾತ್ರ  ಗೊತ್ತು ಆ ನಗು ನಿಲ್ಲೊದಿಲ್ಲಾ ಅಂತ, ಯಾಕೆಂದರೆ ಅದು ಅದು ಅದು ಅದು ಅವಳ ನಗು…… 

       

 

ಮಳೆ ಸುರಿದು ಹೋಯಿತು

ಹೆಜ್ಜೆ ಗುರುತು ಮೊಡಿಸಿತು,

ಹಳಿಸಲಾರೆ ನನ್ನ ಗೆಳತಿ ಇ೦ತ ನೆನಪನು,

ಕೇಳದಯೇ ಪಡೆದುಕೊ೦ಡ ನಾನು ಎಷ್ಟು ಧನ್ಯನು…..


 

Published in: on ಮಾರ್ಚ್ 25, 2009 at 3:30p03  ನಿಮ್ಮ ಟಿಪ್ಪಣಿ ಬರೆಯಿರಿ  

ಹಾಗೆ ಸುಮ್ಮನೆ….

ಪಿಸುಗುಡುವ ಹೃದಯ ಮಿಡಿಯು ತಿಹುದು ನಿನ್ನ ಹೆಸರನು ತುಸು ಮೆಲ್ಲನೆ 

ನಾ ಯಾವಗಲು ಪ್ರಿತಿಸುವೆ ನಿನ್ನನೆ ,

ಯಾಕೋ ಹಾಗೆ ಸುಮ್ಮನೆ….

Published in: on ಮಾರ್ಚ್ 21, 2009 at 3:30p03  ನಿಮ್ಮ ಟಿಪ್ಪಣಿ ಬರೆಯಿರಿ