ನೆನಪಿನ ಬುಟ್ಟಿಯಿಂದ….

 ಆಗಿನ್ನು ನಾ ಚಿಕ್ಕ ಹುಡುಗ, ನಾವಿದಿದ್ದು ಚಿಕ್ಕ ಹಳ್ಳಿಯಲ್ಲಿ, ವಾವ್  ಎಸ್ಟು ಚೆನ್ನಾಗಿತ್ತು ನಮ್ಮ ಹಳ್ಳಿ, ಮಳೆಗಾಲದಲ್ಲಂತೂ ಹಳ್ಳ, ಕೆರೆ  ಎಲ್ಲ ತುಂಬಿರುತಿದ್ದವು, ಆ ಕೆಸರಲ್ಲಿ ಬರಿಗಾಲಲಿ ನೆಡೆಯೊದು ಎಸ್ಟು ಮಜ ಇರುತಿತ್ತು, ಶಾಲೆಯಲ್ಲಿ ಆಡುತಿದ್ದ ಆಟಗಳು, ಮತ್ತೆ ಆ ದಿನಗಳು ಬದುಕಲ್ಲಿ ಎಂದು ಬರೊದಿಲ್ಲ, ನಾ ಆಗೆಲ್ಲಾ ಶಾಲೆಗೆ ಒಂಬತ್ತು ಗಂಟೆಗೆ ಹೋಗಿಬಿಟ್ಟಿರುತಿದ್ದೆ, ಒಂದರಿಂದ ಏಳನೆ ತರಗತಿಯವರೆಗೆ ನಾನೆ ಲೀಡರ್, ನಾ ಸ್ವಲ್ಪ ಸಿನ್ಸಸಿಯರ್ ಜಾಸ್ತಿ, ಯಾರು ಗಲಾಟೆ ಮಾಡಿದರು, ಹೆಡ್ ಮಾಸ್ಟರ್ ಹತ್ತಿರ ಎಳಕೊಂಡು ಹೋಗುತ್ತಾ ಇದ್ದೆ, ನನ್ನ ಫ಼್ರೆಂಡ್ಸಗಳನ್ನು ಸಹ, ನಾ ಏಳನೆ ತರಗತಿಯಲ್ಲಿದ್ದಾಗ ನಾವು ಕಬಡ್ಡಿ ಜಾಸ್ತಿ ಆಡುತಿದ್ದಿವಿ, ಒಂದು ದಿನ ಹುಡುಗಿಯರು ನಮ್ಮ ಜೊತೆ ಕಬಡ್ಡಿ ಆಡಲು ಬಂದರು, ನನಗಿನ್ನು ನೆನಪಿದೆ, ನಾವು ಆ ದಿನ ಕಬಡ್ಡಿಯಲ್ಲಿ ಸೋತೆವು ಕಾರಣ…! ನನ್ನ ನೆನಪಿನ ಬುಟ್ಟಿಯಲ್ಲಿ ಈ ತರದ ಉದಾ: ತುಂಬ ಇವೆ, ಆದರೆ ಕೆಲವನ್ನು ಮಾತ್ರ ಹೇಳುತ್ತೆನೆ, ನಮ್ಮ ಮನೆಯಲ್ಲಿ ಆಟ ಆಡೊದಿಕ್ಕೆ ಬಿಡುತಿರಲಿಲ್ಲ, ಯಾವಗಲು ಓದು ಓದು ಅಂತ ತಾತ ತಲೆ ತಿನ್ನುತ್ತಿದ್ದರು, ಆಗೆಲ್ಲಾ ನಾ ಎಂದು ಇಸ್ಟ ಪಟ್ಟು ಓದಿದವನಲ್ಲಾ, ಬಲವಂತಕ್ಕೆ ಬುಕ್ಸ ಹಿಡಿದು ಕೊತಿರುತ್ತಿದ್ದೆ, ಆದರೆ ತುಂಬ ಸಲ ಏನಾದರು ಸುಳ್ಳು ಹೇಳಿ ಆಟ ಆಡೋದಿಕ್ಕೆ ಹೋಗಿರುತ್ತ ಇದೆ, ಆಗ ತಾತ ಊರೇ ಕಿರುಚಿಹೋಗುವ ರೀತಿ ಕೊಗುತಾ ಇದ್ದರು, ಅವರನ್ನು ಕೊಗಿಸೊದರಲ್ಲಿ ನನಗೆ ಮಜ ಇರುತಿತ್ತು.ನಮ್ಮ ಊರಲ್ಲಿ ಪ್ರತಿ ವರುಷವು ಜಾತ್ರೆ ನೆಡೆಯುತ್ತೆ, ಜಾತ್ರೆಗೆ ದೇವರನ್ನು ಪಕ್ಕದ ಊರಿಂದ ಕರೆತರುತ್ತಿದ್ದರು, ತಮಟೆ ಸದ್ದಿನ ಜೊತೆ ಊರಿನ ಹುಡುಗರೆಲ್ಲಾ ಹೋಗುತ್ತಾಯಿದ್ದರು, ದೇವರನ್ನು ಕರೆತರಲು, ನನಗು ಹೋಗುವ ಆಸೆ ಆದರೆ ಮನೆಯಲ್ಲಿ ಬಿಡುತಿರಲಿಲ್ಲ, ನಾ ಹತ್ತನೆ ತರಗತಿ ಓದುತ್ತ ಇದ್ದೆ, ಆ ವರಷ ಮಾತ್ರ ಆ ಅದೃಸ್ಟ ನನ್ನನ್ನೆ ಹುಡುಕಿಕೊಂಡು ಬಂದಿತ್ತು, ಅದು ಎನು ಅಂದರೆ ದೇವರನ್ನು ಕರೆತರಲು ಆರತಿಯನ್ನು ತಗೊಂಡಗಬೇಕು, ಆ ವರುಷ ಅರತಿ ಹೊರುವ ಸರದಿ ನನ್ನಾದಗಿತ್ತು, ನನಗೆ ಅರತಿ ಹೊರಲು ಒಂಥರ ಖುಷಿ, ಒಂಥರ ಮುಜುಗರ, ಜನರೆಲ್ಲಾ ದೇವರ ಜೊತೆ ನನಗು ಕೈಮುಗಿತ್ತಿದ್ದರು, ಮತ್ತು ದೇವರು ಎಲ್ಲೆ ಹೋಗಲಿ ಆರತಿ ಹೊತ್ತು ನಾ ಮಂದೆ ನಡೆಯಬೇಕಿತ್ತು, ಜಾತ್ರೆಯ ಕೊನಯದಿನ ತುಂಬ ಚೆನ್ನಾಗಿರುತ್ತೆ, ಆ ದಿನ ರಾತ್ರಿ ದೇವರನ್ನು ಹೊತ್ತು ಜನಗಳು ಕುಣಿಯುತ್ತಾರೆ, ಮುಂಚೆಯಲ್ಲಾ ನನಗೆ ಅದನ್ನು ನೋಡಲು ತುಂಬ ಭಯವಾಗುತ್ತಿತ್ತು, ಆದರೆ ಆರತಿ ಹೊತ್ತಿದ್ದರಿಂದ ದೇವರ ಪಕ್ಕದ್ದಲ್ಲೆ ಇರಬೇಕಿತ್ತು, ಪ್ರತಿ ವರುಷವು ದೇವರು ಕೆಲವರ ಮೈ ಮೇಲೆ ಬರುತ್ತಿತ್ತು (ಅವರೆ ದೇವರ ಮೈ ಮೇಲೆ ಹೋಗುತ್ತಿದ್ದರೊ, ನನಗೆ ಗೊತಿಲ್ಲ) ನಮ್ಮ ಆಣ್ನ ಒಬ್ಬ ಇದ್ದಾ(ಸ್ವಂತ ಅಣ್ಣ ಅಲ್ಲ) ಅವನು ದೇವರನ್ನು ಹೊತ್ತಿ ಕೊಂಡು ಕುಣಿಯುತಿದ್ದಾ, ಆ ದಿನ ದೇವರು ಅವನ ಮೈ ಮೇಲೆ ಬಂತು…..! ಮತ್ತು ಆತ ಹೇಳಿದ ಆರತಿಯನ್ನು ನಮ್ಮ ಮನೆಯವರೆ(ತಮ್ಮ) ಹೊರ ಬೇಕು ಅಂತ…. ಅಲ್ಲಿಗೆ ನಾನು ಆರತಿ ಹೊರುವ ಸರದಿ ಮುಗಿಯಿತು, ಮತ್ತು ಆ ವರುಷವೆ ನಾವು ಸಿಟಿಗೆ ಬಂದೆವು(ನನ್ನನ್ನು ಕಾಲೇಜಿಗೆ ಸೇರಿಸಲು). ಅಲ್ಲಿಗೆ ನನ್ನ ಬದುಕಿನ ಹ್ಯಾಪಿಯಾದ ಕ್ಷಣಗಳು ಕೊನೆಗೊಂಡವು, ನನಗೆ ಇಂಗ್ಲಿಷ ಅಂದರೆ ಸ್ವಲ್ಪವು ಇಸ್ಟವಿಲ್ಲಾ, ನಮ್ಮ ಅಪ್ಪಾ ನಾ ಹತ್ತನೆ ತರಗತಿಯಲ್ಲಿದ್ದಾಗ do u know physics ಅಂದರೆ ಏನು ಅಂತ ಕೇಳಿದ್ದರು, ನನಗೆ ನಿಜವಾಗಿಯು ಅದರ ಅರ್ಥ ಆಗ ಗೊತ್ತಿರಲಿಲ್ಲ, ಅದರೆ ಯಾರು ಸಹ ನನ್ನನ್ನು ನಿನಗೆ ಯಾವುದು ಇಸ್ಟ ಅಂತ ಕೇಳಲಿಲ್ಲಾ ನನ್ನನ್ನು ನೇರವಾಗಿ ಸೈನ್ಸಗೆ ಸೇರಿಸಿದರು, ನಾನು ಹೇಗೊ ಓದಿದೆ, ಮತ್ತು ನಾ ಹಳ್ಳಿಬಿಟ್ಟು ಇಲ್ಲಿಗೆ ಆರು ವರುಷ, ಮತ್ತೆ ಎಂದು ಅಲ್ಲಿಗೆ ಹೋಗಲಾಗಲಿಲ್ಲಾ….. ಈ ಸಿಟಿ ನನ್ನ ಬದುಕನ್ನು ಹಾಳು ಮಾಡಿದೆಯೊ ಇಲ್ಲವೊ ಗೊತಿಲ್ಲಾ, ಆದರೆ ನಾ ಹಳ್ಳಿಯಲ್ಲಿ ತುಂಬ ತುಂಬ ಹ್ಯಾಪಿಯಾಗಿದ್ದೆ ಅಂತ ಮಾತ್ರ ಹೇಳಬಲ್ಲೆ……                     

 

Advertisements
Published in: on ಏಪ್ರಿಲ್ 6, 2009 at 3:30p04  ನಿಮ್ಮ ಟಿಪ್ಪಣಿ ಬರೆಯಿರಿ  

The URI to TrackBack this entry is: https://akshara4u.wordpress.com/2009/04/06/%e0%b2%a8%e0%b3%86%e0%b2%a8%e0%b2%aa%e0%b2%bf%e0%b2%a8-%e0%b2%ac%e0%b3%81%e0%b2%9f%e0%b3%8d%e0%b2%9f%e0%b2%bf%e0%b2%af%e0%b2%bf%e0%b2%82%e0%b2%a6/trackback/

RSS feed for comments on this post.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: