ಪ್ರೀತಿಯ ಪ್ರತಿ ಬಿಂಬ, ಹೃದಯದ ತುಂಬ ತುಂಬ….

ಅದೇ….! ದೊಡ್ದ ದೊಡ್ದ ಬೊಟ್ ಬಂದು ನಿಲ್ಲುತವಲ್ಲಾ, ಹಸಿ ಹಸಿ ಮರಳು, ಎಲ್ಲಿ ನೋಡಿದರು ನೀರೆ ನೀರು, ಅ ಸಂಜೆ ನಾ ಅಲ್ಲಿ ಹೋಗಿದ್ದೆ, ನನಗನಿಸುತೆ ಅ ದಿನ ನನ್ನ ಬದುಕಿನಲಿ ಬರದೆ ಇದ್ದಿದ್ದರೆ ಚೆನ್ನಾಗಿರುತಿತ್ತು ಅಂತ….ನಾ ಅಲ್ಲಿ  ಹೋದಾಗ ಅಗಲೇ ಅ ಸೂರ್ಯ ಬಾನಂಗಳಕ್ಕೆ ಬಾಯ್ ಬಾಯ್ ಹೇಳಿ ಹೊರಟು ಹೋಗುತ ಇದ್ದ. ಹಾಗೆ ಅತ ನನ್ನ ಬದುಕಿನಿಂದಲು ಹೊರಟು ಹೋಗುತನೆ ಅನ್ನುವ ಅರಿವು ನನಗಿರಲಿಲ್ಲ…. ನಾ ನನ್ನ ಕನಿಸಿನ ಲೋಕದಲ್ಲಿ ತೇಲುತ ಇದ್ದೆ…. ಅ ನೀರಿನ ಅಲೆಗಳು ಬಂದು ದಡಕ್ಕೆ ಅಪ್ಪಳಿಸುತವಲ್ಲ ಅಗ ಕೆಲವೊಂದು ಹನಿಗಳು ಬಂದು ನನ್ನ ತುಟಿಗೆ ಮುತ್ತಿಟ್ಟು ಹಾಗೆ ಮಾಯವಾಗುತಿದ್ದವು. ನನಗನಿಸುತೆ ಅ ಹನಿಗಳ ಜೊತೆ ನಾನು ಸಹ ಮಾಯವಾಗಿಬಿಟ್ಟೆದೆ ಅಂತ, ಅಲ್ಲಿ ಮರಳಿರುತಲ್ಲಾ ಒಂದು ಪಾಪು ಕಾಲನ್ನು  ಮರಳಲಿಟ್ಟು ಗೊಡು ಕಟ್ಟುತಾಇತ್ತು, ನನಗು ಹಾಗೆ ಮಡಬೇಕು ಅಂತ ಅಸೆ ಅಯಿತು, ನಿಮಗೆ ಗೊತ್ತ ಅದು ಎಸ್ಟು ಹಸಿ ಹಸಿ ಮರಳು ಅಂತ….ಅಂತು ಗೊಡು ರೆಡಿ ಅಯಿತು, ಅಗಲೇ ಅ ಅಲೋಚನೆ ಬಂದಿದ್ದು, ಅದೇ ಅ ಗೊಡಲ್ಲಿ ನಾನು ಅವಳ ಜೊತೆ……ನಾ ಹೇಳಲಪ್ಪ, ಹಾಗೆ ಕಣ್ಣ್ ಮುಚ್ಚಿ ಪಕ್ಕದಲ್ಲೆ ಮಲಗಿದೆ, ಒಂದೆರಡು ನಿಮಿಷ ಅಗಿತ್ತು ಅನಿಸುತೆ, ನನ್ನ ತುಟಿ ಇದ್ದಕ್ಕಿದ್ದ ಹಾಗೆ ತಣ್ಣಗಾಯಿತು, ನನಗಿನ್ನು ನೆನಪಿದೆ….ನಿಮಗೆ ಗೊತ್ತ, ಬುವಿಗೆ ಬರುವ ಮೊದಲನೆ ಮಳೆ ಹನಿ ನನ್ನ ತುಟಿಯನ್ನು ಚುಂಬಿಸಿತ್ತು……..! ನನಗೆ ಅದು ಸಾಕು ಅನಿಸಲಿಲ್ಲ ಮಳೆ ಹನಿ ನನ್ನನ್ನು ಪೂರ್ತಿ ತೊಯಿಸಬೇಕು ಅನಿಸಿತು, ಅದಕ್ಕೆ ಅಲ್ಲೆ ಮಲಗಿ ಬಿಟ್ಟೆ, ಅದರೆ, ನಾ ಆಗ ನಿಜವಾಗಿಯು ಮರೆತಿದ್ದೆ, ಅ ಮಳೆ ಹನಿಗಳು ನನ್ನ ಗೊಡನ್ನು ಕೊಚ್ಚಿ ಕೊಂಡು ಹೋಗುತವೆ ಅನ್ನೊದನ್ನು, ಹಾಗೆ ನನ್ನ ಕನಸುಗಳನ್ನು ಸಹ…………. ಮಳೆ ಸ್ವಲ್ಪ ಜೋರಯಿತು, ಅ ಪಾಪುನ ಅವರಮ್ಮ ಬಂದು ಕರೆದು ಕೊಂಡು ಹೋದರು ಅನಿಸುತೆ, ಪಾಪು ಅಲ್ಲಿರಲಿಲ್ಲ, ಮಳೆ ಸ್ವಲ್ಪ ಜೋರಾಯಿತು, ಅಲೆಗಳು ಜೋರಾಗಿ ಬಂದು ದಡಕ್ಕೆ ಅಪ್ಪಳಿಸುತಾ ಇದ್ದವು, ಆ ಅಲೆಗಳ ಜೊತೆ ನಗುವಿನ ಅಲೆ ಅಲೆ….  ನಾ ತುಂಬ ಟ್ರ್ಯ್ ಮಾಡಿದೆ ಆ ದನಿಯನ್ನು ಗುರುತಿಸಲು ಯಾಕೆ ಅಂದರೆ ನಾ ನಗುವನ್ನು ತುಂಬ, ತುಂಬ ಸರಿ ಕೇಳಿದ್ದೆನೆ , ಅದರೆ ಆ ದಿನ ನಾ ಸೋತು ಹೋದೆ…. ಆ ದನಿಯನ್ನು ಗುರುತಿಸಲಾಗಲಿಲ್ಲ,  ನನಗೆ ತಿಳಿದಿರಲಿಲ್ಲ, ಆಗ ನಾ ಕಣ್ಣ್ ಬಿಟ್ಟಿದ್ದರೆ ಬಹುಷಃ ಸತ್ತೆ ಹೋಗುತ ಇದ್ದೆನೆನೊ, ಬದುಕಿಬಿಟ್ಟೆ….! ಅಸ್ಟರಲ್ಲಿ ಮಳೆ ಜೋರಾಯಿತು, ನಾ ಪೂರ್ತಿ ನೆನೆದು ಬಿಟ್ಟಿದ್ದೆ, ಆಗ ಆತ ಹೇಳಿದ್ದು ಕೇಳಿಸಿತು “ಯಾರೋ ಹುಚ್ಚ ಇರಬೇಕು, ಅದಕ್ಕೆ ಹೀಗೆ ಮಲಗಿದ್ದಾನೆ “, ನನಗೆ ನಗು ಬಂತು, ತುಂಬ ಜೋರಾಗಿ ನಕ್ಕು ಬಿಟ್ಟೆ, ಎನು….? ನಾ ಹುಚ್ಚನ, ಯಾಕೊ ಈಗೀಗ ಹಾಗೆ ಅನಿಸುತ ಇದೆ, ಅದು ನನ್ನ ಬದುಕಿನ ಕೊನೆಯ ನಗು….! ನಾ ಜೋರಾಗಿ ನಕ್ಕಿದ್ದು ನೋಡಿ, ಅವರಿಬ್ಬರು ಎದರಿಬಿಟ್ಟರು ಅನಿಸುತೆ, ಅದಕ್ಕೆ ಓಡಿ ಹೋಗಿ ಬಿಟ್ಟುರು, ನಾ ಇನ್ನು ಕಣ್ ಬಿಟ್ಟಿರಲಿಲ್ಲ, ನನಗೆ ಕಣ್ ಬಿಡುವದಕ್ಕೆ ಮನಸ್ಸಾಗಲಿಲ್ಲ, ಇನ್ನು, ಇನ್ನು ನೆನೆಯ ಬೇಕು ಅನಿಸುತ ಇತ್ತು, ಅದರೆ ಆ ನಗುವಿನ ಅಲೆಗಳು ಮತ್ತೆ ಮತ್ತೆ ನನ್ನ ಹೃದಯಕ್ಕೆ ಬಂದು ಅಪ್ಪಳಿಸುತಾ ಇದ್ದವು, ಅವಳು ನನ್ನನ್ನೆ ನೋಡಿ ನಗುತಿದ್ದಾಳೆನೊ ಅನಿಸಿತು, ಇದ್ದಕಿದ್ದಂತೆ ಮರಳು ಗೊಡು ನೆನಪಾಯಿತು, ತಕ್ಷಣ ಎದ್ದು ಬಿಟ್ಟೆ, ನನಗಿನ್ನೂ ನೆನಪಿದೆ….. ಆ ಹೆಜ್ಜೆ ಗುರುತುಗಳು, ಅದು ಅದು….! ಅವಳ ಹೆಜ್ಜೆಗುರುತುಗಳೆ, ಅದು ನನ್ನ ಮರಳ ಗೊಡಿನ ಮೇಲೆ, ನನ್ನಾ ಕನಸುಗಳೆಲ್ಲಾ ಚೊರು ಚೊರಾಗಿದ್ದವು, ಆ ಮರಳಿನ ಕಣಗಳು ನನ್ನನ್ನು ನೋಡಿ ನಗುತ ಇದ್ದವು ಅನಿಸುತೆ, ನಾ ಆ ಮರಳಿನ ಕಣಗಳಿಗೆ ಮುತ್ತಿಡುತಾಇದ್ದೆ, ಆ ನೋವಿನಲ್ಲು ನನಗೆ ಗೊತ್ತಾಗಿದ್ದು ಅಂದರೆ, ಇನ್ನು ನನ್ನ ಬದುಕಿನಲಿ ಉಳಿಯುವುದು ಬರಿ ನೆನಪು ಮತ್ತು ಹಸಿ ಹಸಿ ಮರಳು ಅಂತ, ನಾ ಅ ಮರಳನೆಲ್ಲಾ ಎತ್ತಿ ಜೋಬಲ್ಲಿ ಹಾಕೊಂಡೆ, ಆ ನಗು ಮಾತ್ರ ಇನ್ನು ನಿಂತಿರಲಿಲ್ಲಾ, ನನಗೆ ಮಾತ್ರ  ಗೊತ್ತು ಆ ನಗು ನಿಲ್ಲೊದಿಲ್ಲಾ ಅಂತ, ಯಾಕೆಂದರೆ ಅದು ಅದು ಅದು ಅದು ಅವಳ ನಗು…… 

       

 

ಮಳೆ ಸುರಿದು ಹೋಯಿತು

ಹೆಜ್ಜೆ ಗುರುತು ಮೊಡಿಸಿತು,

ಹಳಿಸಲಾರೆ ನನ್ನ ಗೆಳತಿ ಇ೦ತ ನೆನಪನು,

ಕೇಳದಯೇ ಪಡೆದುಕೊ೦ಡ ನಾನು ಎಷ್ಟು ಧನ್ಯನು…..


 

Published in: on March 25, 2009 at 3:30p03  Leave a Comment  

The URI to TrackBack this entry is: http://akshara4u.wordpress.com/2009/03/25/%e0%b2%aa%e0%b3%8d%e0%b2%b0%e0%b3%80%e0%b2%a4%e0%b2%bf%e0%b2%af-%e0%b2%aa%e0%b3%8d%e0%b2%b0%e0%b2%a4%e0%b2%bf-%e0%b2%ac%e0%b2%bf%e0%b2%82%e0%b2%ac-%e0%b2%b9%e0%b3%83%e0%b2%a6%e0%b2%af%e0%b2%a6/trackback/

RSS feed for comments on this post.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Connecting to %s

Follow

Get every new post delivered to your Inbox.